🌷 ಅಂತಾರಾಷ್ಟ್ರೀಯ ಹುಲಿ ದಿನ 2021: ಇತಿಹಾಸ, ಮಹತ್ವ, ಘೋಷಣೆಗಳು
=================
ಜನರಿಗೆ ಹುಲಿ ಕೇವಲ ಬೇಟೆ ಆಡುವ ಭಕ್ಷಕ, ಆದರೆ ಅದೇ ಕಲಾಕಾರನಿಗೆ ಹುಲಿ ಒಂದು ಅಂದದ ಕಲಾಕೃತಿ. ಇನ್ನು ತಜ್ಞರಿಗೆ ಹುಲಿಯೊಂದು ಕಾಡಿನ ರಕ್ಷಕ. ಜುಲೈ 29ರಂದು ಹಲಿ ದಿನವನ್ನಾಗಿ ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ
===========
ಜಗತ್ತಿನ ಕೇವಲ 13 ರಾಷ್ಟ್ರಗಳಲ್ಲಿ ಮಾತ್ರ ಹುಲಿ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಹುಲಿಗಳ ಸಂರಕ್ಷ ಣೆ ಕುರಿತು ಅರಿವು ಮೂಡಿಸುವ ಸಲುವಾಗಿ 2010 ರಲ್ಲಿ ರಷ್ಯಾದ ಸೇಂಟ್ ಪೀಟರ್ ಬರ್ಗ್ ಹುಲಿ ಸಮಿತಿ ಜುಲೈ 29 ಅನ್ನು ಅಂತಾರಾಷ್ಟ್ರೀಯ ಹುಲಿದಿನವನ್ನಾಗಿ ಆಚರಿಸುವ ಸಂಕಲ್ಪ ಮಾಡಿತು.
=========
ಒಂದು ಹುಲಿ 13 ಅಡಿ ಉದ್ದ 300 ಕೆಜಿವರೆಗೂ ತೂಗುತ್ತದೆ. ಸಿಂಹದಂತೆ ಇದು ಗುಂಪಿನಲ್ಲಿ ಇರುವ ಪ್ರಾಣಿಯಲ್ಲ. ಒಂಟಿಯಾಗಿ ಇರಲು ಬಯಸುವ ಬುದ್ಧಿವಂತ ಜೀವಿ.
=========
ಭಾರತದ ಮಟ್ಟಿಗೆ ಬಂಗಾಳದ ಹುಲಿಗಳಿಗೆ ಹೆಚ್ಚಿನ ಮಹತ್ವವಿದೆ. ಹಾಗೇ ನೋಡಿದರೆ ವಿಶ್ವದಲ್ಲಿ ಇರುವ ಶೇ. 70 ರಷ್ಟು ಹುಲಿಗಳು ಭಾರತದಲ್ಲೇ ಇವೆ. ಇದು ನಮಗೆ ಹೆಮ್ಮೆಯ ವಿಷಯ. 2014ರ ಹುಲಿ ಗಣತಿ ಪ್ರಕಾರ 2,226 ಹುಲಿಗಳು ಭಾರತದಲ್ಲಿವೆ. ಪಶ್ಚಿಮ ಘಟಕ್ಕೆ ಹೊಂದಿಕೊಂಡಿರು ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಹುಲಿಗಳ ಸಂಖ್ಯೆಹೆಚ್ಚಿದೆ.
===========
ಕರ್ನಾಟಕದಲ್ಲಿ 5 ಹುಲಿ ಸುರಕ್ಷಿತ ಪ್ರದೇಶಗಳಿವೆ. ಬಂಡೀಪುರ, ನಾಗರಹೊಳೆಯಲ್ಲಿ ಹುಲಿಗಳ ಸಂತತಿ ವೃದ್ಧಿಸುತ್ತಿದೆ.
=======
ಹುಲಿ ಸಂಖ್ಯೆ ಇರುವಂತಹ ರಾಷ್ಟ್ರಗಳು ಹುಲಿಗಳ ಸಂಖ್ಯೆಯನ್ನು 2020ರ ವೇಳೆಗೆ ದ್ವಿಗುಣ ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳಲಾಯಿತು.
=========
1972ರ ವನ್ಯಜೀವಿ ಕಾಯ್ದೆ ಬಂದ ನಂತರ ಹುಲಿಗಳನ್ನು ಉಳಿಸುವ ಸಲುವಾಗಿ 1973ರಲ್ಲಿ ಪ್ರಾಜೆಕ್ಟ್ ಟೈಗರ್ ಎಂಬ ಯೋಜನೆ ಜಾರಿಗೆ ಬಂತು, ಈ ಯೋಜನೆ ಹುಲಿ ಸಂರಕ್ಷಣೆಗೆ ಬಲವನ್ನು ನೀಡಿತು. ಜಗತ್ತಿನ 13 ದೇಶಗಳಲ್ಲಿ ಮಾತ್ರ ಹುಲಿ ಸಂತತಿ ಬರುತ್ತದೆ. ಒಟ್ಟು 6 ಜಾತಿಯ ಹುಲಿಗಳಿದ್ದು, ಹೆಚ್ಚು ಹುಲಿಗಳು ಏಷ್ಯಾಖಂಡದಲ್ಲಿಯೇ ಕಂಡು ಬರುತ್ತವೆ. ಭಾರತವು 50 ಹುಲಿ ಸಂರಕ್ಷಿತ ಅಭಯಾರಣ್ಯಗಳನ್ನು ಹೊಂದಿದೆ.
======
🐅 ಅಂತಾರಾಷ್ಟ್ರೀಯ ಹುಲಿ ದಿನ 2021: ಘೋಷಣೆಗಳು
=========
1. ಹುಲಿಗಳನ್ನು ಉಳಿಸಲು ನಿಮ್ಮ ಧ್ವನಿಯನ್ನು ಏರಿಸಿ
2. ಅದುಶಾಶ್ವತವಾಗಿ ಕಣ್ಮರೆಯಾಗುವ ಮೊದಲು ಎಚ್ಚರವಹಿಸಿ
3. ನಮಗೆ ಹುಲಿಗಳ ಸಂತತಿ ಹೆಚ್ಚಬೇಕು
4. ಕಾಡಿನ ರಾಜನನ್ನು ಉಳಿಸಿ
5. ಹುಲಿ ಇತಿಹಾಸವಾದಲ್ಲಿ ಅದನ್ನು ಮರುಸೃಷ್ಟಿಸಲು ಸಾಧ್ಯವಿಲ್ಲ
0 Comments